ಹಿಂದೂಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್ ರೈ | Oneindia Kannada

2017-11-04 898

ಬಹುಭಾಷಾ ನಟ ಪ್ರಕಾಶ್ ರೈ ಮತ್ತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದೂ ಭಯೋತ್ಪಾದನೆ ಬಗ್ಗೆ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಪ್ರಕಾಶ್ ರೈ ಕೂಡ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. "ಧರ್ಮ, ಸಂಸ್ಕೃತಿ, ನೈತಿಕತೆ ಹೆಸರಿನಲ್ಲಿ ಭಯ ಬಿತ್ತುವುದು ಭಯೋತ್ಪಾದನೆ ಅಲ್ಲವಾದರೆ.. ಭಯೋತ್ಪಾದನೆ ಅಂದರೆ ಮತ್ತೇನು.. ಸುಮ್ಮನೆ ಕೇಳುತ್ತಿದ್ದೇನೆ," ಎನ್ನುವ ಅರ್ಥದ ಪ್ರಕಾಶ್ ರೈ ಟ್ವೀಟಿಸಿದ್ದಾರೆ. ಕಮಲ್ ಹಾಸನ್ ಹೇಳಿಕೆ ಬೆಂಬಲಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿರುವ ಬೆನ್ನಿಗೆ ಇದೀಗ ಪ್ರಕಾಶ್ ರೈ ಟ್ವೀಟ್ ಕೂಡ ಸದ್ದು ಮಾಡುತ್ತಿದೆ.ಇದು ಯಾರಿಗೆ ಸಂಬಂಧಿಸಿದ್ದೋ ಅವರಿಗೆ' ತಲೆ ಬರಹದಲ್ಲಿ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಯುವ ಜೋಡಿಯ ಮೇಲೆ ನನ್ನ ದೇಶದ ರಸ್ತೆಯಲ್ಲಿ ದೌರ್ಜನ್ಯ, ಹಲ್ಲೆ ನಡೆಸುವುದು ಭಯೋತ್ಪಾದನೆಯಲ್ಲವಾದರೆ... ಗೋ ಹತ್ಯೆ ಮಾಡಿದ್ದಾರೆ ಎಂಬ ಸಣ್ಣ ಅನುಮಾನ ಬಂದ ಕೂಡಲೇ ಕಾನೂನನ್ನು ಕೈಗೆತ್ತಿಕೊಂಡು ಜನರ ಮೇಲೆ ದಾಳಿ ಮಾಡುವುದು ಭಯೋತ್ಪಾದನೆಯಲ್ಲವಾದರೆ... ಸಣ್ಣ ವಿರೋಧದ ಧ್ವನಿಯನ್ನೂ ಹತ್ತಿಕ್ಕಲು ದೌರ್ಜನ್ಯ, ಬೆದರಿಕೆಯ ಟ್ರೋಲ್ ಮಾಡುವುದು ಭಯೋತ್ಪಾದನೆಯಲ್ಲವಾದರೆ.. ಮತ್ತೇನು ಭಯೋತ್ಪಾದನೆ ಅಂದರೆ.. ಸುಮ್ಮನೆ ಕೇಳುತ್ತಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ.

Videos similaires